Mon,Nov02,2026
ಕನ್ನಡ / English

ಗುತ್ತಿಗೆದಾರರ ಬಿಲ್ ಬಾಕಿ, ತನಿಖೆಯಾಗದೆ ಗುತ್ತಿಗೆದಾರರ ಬಾಕಿ ಮೊತ್ತ ಪಾವತಿಸಲಾಗದು | JANATA NEWS

12 Aug 2023

ಮೈಸೂರು : ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಗುತ್ತಿಗೆದಾರರ ಬಿಲ್ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದಿದ್ದಾರೆ.

ಇಂದು ರಾಜ್ಯ ಮಟ್ಟದ ವಕೀಲರ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಹುಟ್ಟುಹಬ್ಬ ಆಗಸ್ಟ್ 3, ಆಗಸ್ಟ್ 12 ಎಂಬ ಎರಡು ದಿನಾಂಕಗಳು ಕೂಡ ತಪ್ಪು. ಒಂದನ್ನು ನಮ್ಮ ಮೇಷ್ಟ್ರು ಬರೆಸಿದ್ದರು, ಮತ್ತೊಂದನ್ನು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಅನ್ನು ಬರೆಸಿದ್ದರು. ಈ ಎರಡು ದಿನಾಂಕಗಳು ಕೂಡ ತಪ್ಪು. ನನ್ನ ಜನ್ಮದಿನಾಂಕ ನನಗೆ ಸರಿಯಾಗಿ ಗೊತ್ತಿಲ್ಲ. ಹಾಗಾಗಿ ನನ್ನ ಹುಟ್ಟುಹಬ್ಬದ ದಿನಾಂಕದ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ತಿಳಿಸಿದರು.

ನಾವು ಹಿಂದೆ ಬಿಜೆಪಿಯವರ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕಿದೆ. ಹೀಗಿರುವಾಗ ಗುತ್ತಿಗೆದಾರರ ಬಿಲ್​ ಪಾವತಿಗೆ ಆತುರಪಟ್ಟರೆ ಹೇಗೆ, ತನಿಖೆಯಾಗದೆ ಬಾಕಿ ಮೊತ್ತವನ್ನು ಪಾವತಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುತ್ತಿಗೆದಾರರಿಂದ ಶೇ. 40ರಷ್ಟು ಕಮಿಷನ್​ ಪಡೆದಿರುವ ಬಿಜೆಪಿಯವರಿಗೆ ನಮ್ಮ ವಿರುದ್ಧ ಹೋರಾಟ ನಡೆಸುವ ನೈತಿಕತೆ ಇಲ್ಲ. ಅವರು ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.

ಶೇ. 40ರಷ್ಟು ಕಮಿಷನ್​ ಬಗ್ಗೆ ತನಿಖೆ ನಡೆಸದೆ ಗುತ್ತಿಗೆದಾರರಿಗೆ ಹೇಗೆ ಬಿಲ್ ಪಾವತಿಸಲು ಸಾಧ್ಯ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸ್​ಐಟಿಗೆ ಸೂಚಿಸಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ. ಒಂದು ವೇಳೆ ಭ್ರಷ್ಟಾಚಾರ ಹಾಗೂ ಕಾಮಗಾರಿಗಳಲ್ಲಿ ಲೋಪ ಎಸಗಿರುವವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಜೊತೆಗೆ ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದೇನೆ. ಎಲ್ಲರಿಗೂ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ ಎಂದರು.

RELATED TOPICS:
English summary :Contractor bill arrears, Contractor arrears are not payable without investigation

'ಸ್ಟಿಂಗ್ ವಿಡಿಯೋ' ಹರಡಿದ ಆರೋಪ: ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ à²
'ಸ್ಟಿಂಗ್ ವಿಡಿಯೋ' ಹರಡಿದ ಆರೋಪ: ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ à²
ಜೌಹರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಜಂ ಖಾನ್‌ ಬಂಧಿಸಿದ ಜಾರಿ ನಿರ್ದೇà²
ಜೌಹರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಆಜಂ ಖಾನ್‌ ಬಂಧಿಸಿದ ಜಾರಿ ನಿರ್ದೇà²
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ಗೆ ಚಾಲನೆ; ಪ್ರಯಾಣದ ಅವಧಿ 16 ಗಂಟೆಗಳಿಗೆ à²
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ಗೆ ಚಾಲನೆ; ಪ್ರಯಾಣದ ಅವಧಿ 16 ಗಂಟೆಗಳಿಗೆ à²
ಇರಾನ್ ವಿರುದ್ಧ ಅಮೆರಿಕ ಮಿಲಿಟರಿ ಆಯ್ಕೆ ಮುಕ್ತ; ಆದರೆ ಟ್ರಂಪ್ ರಿಂದ ರಾಜತಾಂತ್ರಿಕ ನಿರ್ಣಯಕ್ಕೆ ಆದ್ಯತೆ - ಮಾರ್ಕೊ ರà³
ಇರಾನ್ ವಿರುದ್ಧ ಅಮೆರಿಕ ಮಿಲಿಟರಿ ಆಯ್ಕೆ ಮುಕ್ತ; ಆದರೆ ಟ್ರಂಪ್ ರಿಂದ ರಾಜತಾಂತ್ರಿಕ ನಿರ್ಣಯಕ್ಕೆ ಆದ್ಯತೆ - ಮಾರ್ಕೊ ರà³
ದೇವೇಗೌಡರನ್ನು ಭೇಟಿಯಾದ ಯಡಿಯೂರಪ್ಪ; ಕರ್ನಾಟಕದಲ್ಲಿ ಬಿಜೆಪಿ-ಜೆಡಿ(ಎಸ್) ಮೈತ್ರಿ ಇನ್ನಷ್ಟು ಬಲಗೊಳ್ಳಿಸಲು ಪ್ರತಿà²
ದೇವೇಗೌಡರನ್ನು ಭೇಟಿಯಾದ ಯಡಿಯೂರಪ್ಪ; ಕರ್ನಾಟಕದಲ್ಲಿ ಬಿಜೆಪಿ-ಜೆಡಿ(ಎಸ್) ಮೈತ್ರಿ ಇನ್ನಷ್ಟು ಬಲಗೊಳ್ಳಿಸಲು ಪ್ರತಿà²
ನಾವ್ಐಸಿ ಬಲಪಡಿಸಲು ಎನ್.ವಿಎಸ್-03 ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ-ಎಫ್18 ಯಶಸ್ವಿ ಉಡಾವಣೆ ಮಾಡಿದ à²
ನಾವ್ಐಸಿ ಬಲಪಡಿಸಲು ಎನ್.ವಿಎಸ್-03 ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ-ಎಫ್18 ಯಶಸ್ವಿ ಉಡಾವಣೆ ಮಾಡಿದ à²
ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಕರ್ನಾಟಕದ 5 ಜನ ಸೇರಿ ಪ್ರಯಾಣಿಸುತ್ತಿದ್ದ 6 ಮಂದಿ
ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಕರ್ನಾಟಕದ 5 ಜನ ಸೇರಿ ಪ್ರಯಾಣಿಸುತ್ತಿದ್ದ 6 ಮಂದಿ
ರೈತರಿಗೆ ನೀಡುವ ಸಬ್ಸಿಡಿ ಹೊರೆ ಗ್ರಾಹಕರ ಮೇಲೆ ; ಹಾಲಿನ ದರ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗà³
ರೈತರಿಗೆ ನೀಡುವ ಸಬ್ಸಿಡಿ ಹೊರೆ ಗ್ರಾಹಕರ ಮೇಲೆ ; ಹಾಲಿನ ದರ ಏರಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗà³
ಪತ್ರಕರ್ತ ಸೌರವ್ ದಾಸ್ ಅವರ ರಾಷ್ಟ್ರೀಯತೆ, ಹಿನ್ನೆಲೆ ಬಗ್ಗೆ ತನಿಖೆ ನಡೆಸಲು ಕೋರಿ ಅರ್ಜಿ : ಪ್ರತಿಕ್ರಿಯೆ ಕೋರಿದ ಮದ್ರಾಸ್ ಹೈಕà³
ಪತ್ರಕರ್ತ ಸೌರವ್ ದಾಸ್ ಅವರ ರಾಷ್ಟ್ರೀಯತೆ, ಹಿನ್ನೆಲೆ ಬಗ್ಗೆ ತನಿಖೆ ನಡೆಸಲು ಕೋರಿ ಅರ್ಜಿ : ಪ್ರತಿಕ್ರಿಯೆ ಕೋರಿದ ಮದ್ರಾಸ್ ಹೈಕà³
ಕರ್ನಾಟಕದಲ್ಲಿ ಸರಿಯಾಗಿ ಮಾಡಲಾಗಿದೆ - ಸತೀಶ್ ಜಾರಕಿಹೊಳಿ ; ಸುಮಾರು 1 ಕೋಟಿ ಮತದಾರರ ಅಳಿಸುವಿಕೆಗಳ ಸಮà²
ಕರ್ನಾಟಕದಲ್ಲಿ ಸರಿಯಾಗಿ ಮಾಡಲಾಗಿದೆ - ಸತೀಶ್ ಜಾರಕಿಹೊಳಿ ; ಸುಮಾರು 1 ಕೋಟಿ ಮತದಾರರ ಅಳಿಸುವಿಕೆಗಳ ಸಮà²
ನವೆಂಬರ್ 1 ರಿಂದ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳ; ಕಾಂಗ್ರೆಸ್ ನೀಡಿದ 'ದೀಪಾವಳಿ ಉಡುà
ನವೆಂಬರ್ 1 ರಿಂದ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳ; ಕಾಂಗ್ರೆಸ್ ನೀಡಿದ 'ದೀಪಾವಳಿ ಉಡುà
362 ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿಯನ್ನು ಸಿಂಧುಗೊಳಿಸುವ ಕರ್ನಾಟಕದ ಕಾನೂನನ್ನು ರದ್ದುಗೊಳಿಸಿದ ಸುಪ್ರೀಂ ಕà³
362 ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿಯನ್ನು ಸಿಂಧುಗೊಳಿಸುವ ಕರ್ನಾಟಕದ ಕಾನೂನನ್ನು ರದ್ದುಗೊಳಿಸಿದ ಸುಪ್ರೀಂ ಕà³

ನ್ಯೂಸ್ MORE NEWS...