ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಅದು ಭಾರತದ ಒಂದು ಭಾಷೆ ಅಷ್ಟೇ - ಶಿವಣ್ಣ ಸ್ಪಷ್ಟನೆ | Filmz news
: ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಹೇಳಿಕೆ ನೀಡಿದ್ದು, ಬಳಿಕ ತಮ್ಮ ಹೇಳಿಕೆ ಬಹುದೊಡ್ಡ ವಿವಾದ ಸೃಷ್ಟಿಸುವ ಸಾಧ್ಯತೆಗಳನ್ನು ಮನಗಂಡ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.
ಅವರ ಮುಂದಿನ ಸಿನಿಮಾ "ಒರಿಜಿನಲ್ ಮಾನ್ಸ್ಟರ್" ಮಹೂರ್ತದ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ ಮಾತಿನಬರದಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದರು. ಹಿಂದಿ ಭಾಷೆಯಲ್ಲೂ ಡಬ್ಬಿಂಗ್ ಅನ್ನು ಸ್ವತಃ ಮಾಡುವುದಾಗಿ ತಿಳಿಸಿದ್ದ ಅವರು, "... ನನಗೂ ಹಿಂದಿ ಬರುತ್ತದೆ. ಅದು ನನ್ನ ಎರಡನೇ ಭಾಷೆ(ಶಾಲೆಯಲ್ಲಿ).... ಅದು ರಾಷ್ಟ್ರೀಯ ಭಾಷೆ. ನನಗೆ ಮಾತನಾಡಲು ಬರುತ್ತದೆ." ಎಂದು ಮಾತಿನ ಬರದಲ್ಲಿ ಹೇಳಿದ್ದರು.
No one trolls Horatagaras better than their own masters & idols. pic.twitter.com/VRtPxD67Th
— Vije (@vijeshetty) September 8, 2026
ಬಳಿಕ ಈ ಕುರಿತು ಮಾತನಾಡಿದ ಶಿವಣ್ಣ ಅವರು, "...ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಅದು ಒಂದು ಭಾಷೆ(ಭಾರತದ) ಅಷ್ಟೇ... ಅವರವರ ಭಾಷೆ ಅವರಿಗೆ ಮುಖ್ಯ. ನಮಗೆ ನಮ್ಮ ಕನ್ನಡವೇ ಮುಖ್ಯ.. ", ಎಂದು ಅಭಿಮಾನಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
Shivarajkumar, for his part, clarified his statement and even apologised at the same press meet.
— Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | (@ShyamSPrasad) September 8, 2026
But the problem is far bigger than one actor’s mistaken belief. It is systemic.
Ask Karnataka’s 224 MLAs and a majority would probably tell you that Hindi is India’s national… https://t.co/KDZHDYmMGL pic.twitter.com/sRrxBxBLhM
157