ವೈಯಕ್ತಿಕ ವೈಮಾನಿಕ ಸಂಚಾರಕ್ಕೆ ವಿದ್ಯುತ್ ಚಾಲಿತ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತದ ಸ್ಟಾರ್ಟ್ ಅಪ್ | JANATA NEWS
ಉತ್ತರಖಂಡ : ಉತ್ತರಾಖಂಡದ ಸ್ಟಾರ್ಟ್-ಅಪ್ ಕಂಪನಿಯೊಂದು, ವೈಯಕ್ತಿಕ ವೈಮಾನಿಕ ಸಂಚಾರವನ್ನು (personal sky mobility) ಸಾಧ್ಯವಾಗಿಸಲು ಮಾರ್ಪಡಿಸಿದ ಡ್ರೋನ್ ತಂತ್ರಜ್ಞಾನವನ್ನು ಬಳಸುವ, ಒಬ್ಬರು ಕುಳಿತುಕೊಳ್ಳಬಹುದಾದ ಹಾಗೂ ಸಂಪೂರ್ಣ ವಿದ್ಯುತ್ ಚಾಲಿತ ವಾಹನವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
'ಹಪಿಡಾ ಸ್ಕೈ ಪ್ರೈವೇಟ್ ಲಿಮಿಟೆಡ್'ನ (Hapida Sky Private Limited) ಸಂಸ್ಥಾಪಕರಾದ ರವಿ ತಮ್ಟಾ ಅವರು, ಉತ್ತರಾಖಂಡದ ಅಲ್ಮೋರಾದಲ್ಲಿ 'HAPIDA SKYNeX' ಎಂಬ ಹಾರುವ ವಾಹನದ ಮಾದರಿಯನ್ನು (ಪ್ರೊಟೊಟೈಪ್) ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಇದು ಮಾರ್ಪಡಿಸಿದ ಡ್ರೋನ್ ತಂತ್ರಜ್ಞಾನವನ್ನು ಬಳಸುವ, ಒಬ್ಬರು ಕುಳಿತುಕೊಳ್ಳಬಹುದಾದ ಹಾಗೂ ಸಂಪೂರ್ಣ ವಿದ್ಯುತ್ ಚಾಲಿತ ವಾಹನವಾಗಿದೆ.
English summary :Indian startup successfully tested single-seater all-electric craft
306